NANDA Talkies

Directions

NANDA Talkies ಇದು ಸಿನಿಮಾ ಬದುಕಿನ, ನೆನಪಿನ ಪುಟಗಳ,
ಅನಾವರಣ...

23/08/2026
ಸ್ನೇಹ, ಆತ್ಮೀಯತೆಗೆ ಇನ್ನೊಂದು ಹೆಸರು ಆಪ್ತಮಿತ್ರ ಡಾ. ವಿಷ್ಣುವರ್ಧನ ಅವರು. ಅದು ಅಭಿಮಾನಿಗಳ ನಿಷ್ಕಲ್ಮಶವಾದ ಪ್ರೀತಿ-ಅಭಿಮಾನವನ್ನು ಗೌರವಿಸುವು...
13/06/2026

ಸ್ನೇಹ, ಆತ್ಮೀಯತೆಗೆ ಇನ್ನೊಂದು ಹೆಸರು ಆಪ್ತಮಿತ್ರ ಡಾ. ವಿಷ್ಣುವರ್ಧನ ಅವರು. ಅದು ಅಭಿಮಾನಿಗಳ ನಿಷ್ಕಲ್ಮಶವಾದ ಪ್ರೀತಿ-ಅಭಿಮಾನವನ್ನು ಗೌರವಿಸುವುದಾಗಲಿ, ಸಿನಿಮಾ ರಂಗದ ಯಾವುದೇ ಕಲಾವಿದ-ತಂತ್ರಜ್ಞರಿಗೆ ಆತ್ಮೀಯತೆ ತೋರುವುದಾಗಲಿ ಸಾಹಸಸಿಂಹ ಡಾ.ವಿಷ್ಣುವರ್ಧನ ಅವರ ಹೃದಯವಂತಿಕೆ ಎಂದೂ ಮರೆಯುವಂತಿಲ್ಲ.
ಆ ದಿನ ಹೈದರಾಬಾದಿನ ರಾಮೋಜಿರಾವ್ ಫಿಲಂ ಸಿಟಿಯಲ್ಲಿ ಖ್ಯಾತ ನಿರ್ಮಾಪಕರಾದ ಕೆ.ಮಂಜು ಅವರು ನಿರ್ಮಿಸುತ್ತಿದ್ದ, ಖ್ಯಾತ ನಿರ್ದೇಶಕರಾದ ಎಸ್.ನಾರಾಯಣ್ ಅವರ ನಿರ್ದೇಶನದ "ಜಮೀನ್ದಾರ್ರು" ಚಿತ್ರೀಕರಣ ವೀಕ್ಷಿಸಲು ಬೆಂಗಳೂರಿನಿಂದ ಚಲನಚಿತ್ರ ಪತ್ರಕರ್ತರನ್ನು ಆಹ್ವಾನಿಸಲಾಗಿತ್ತು.
ಚಿತ್ರೀಕರಣ ವೀಕ್ಷಿಸಿ ಮರುದಿನ ಹಿಂದಿರುಗುವಾಗ ಸಮೀಪದಲ್ಲೇ ನಡೆಯುತ್ತಿದ್ದ "ಹನುಮಾನ್ ಜಂಕ್ಷನ್" ಚಿತ್ರೀಕರಣದಲ್ಲಿ ಸಾಹಸಸಿಂಹ ಡಾ.ವಿಷ್ಣುವರ್ಧನ ಅವರು ಖ್ಯಾತ ನಟರಾದ ಅರ್ಜುನ್ ಸರ್ಜಾ ಹಾಗೂ ಜಗಪತಿ ಬಾಬು ಅವರೊಂದಿಗೆ ಆತ್ಮೀಯವಾಗಿ ಬೆರೆತು ಶುಭ ಹಾರೈಸಿದ ಅಪರೂಪದ ಕ್ಷಣಗಳನ್ನು ಸೆರೆ ಹಿಡಿಯುವ ಅವಕಾಶ ನನ್ನದಾಗಿತ್ತು.
ಪ್ರೀತಿಯಿಂದ
-ನಿಮ್ಮ ನಂದಕುಮಾರ್
#

Address

Bangalore
560009

Website

Alerts

Be the first to know and let us send you an email when NANDA Talkies posts news and promotions. Your email address will not be used for any other purpose, and you can unsubscribe at any time.

Shortcuts

Share