Hotel Mayura Nisarga Muthyalamaduvu KSTDC

Hotel Mayura Nisarga Muthyalamaduvu KSTDC Contact information, map and directions, contact form, opening hours, services, ratings, photos, videos and announcements from Hotel Mayura Nisarga Muthyalamaduvu KSTDC, Hotel, Muthyalamaduvu Anekal, Bangalore.

19/08/2022
ಆಕರ್ಷಣೀಯ ಸುಂದರವಾದ ತಾಣ ಆನೇಕಲ್ ತಾಲ್ಲೂಕಿನ ಸುಪ್ರಸಿದ್ಧ " ಮುತ್ಯಾಲ ಮಡುವು "    ಆನೇಕಲ್ ......ಪಟ್ಟಣದಿಂದ 4 ಕಿ.ಮೀ. ಅಂತರದಲ್ಲಿ ಇರುವ ಹಚ...
08/08/2022

ಆಕರ್ಷಣೀಯ ಸುಂದರವಾದ ತಾಣ ಆನೇಕಲ್ ತಾಲ್ಲೂಕಿನ ಸುಪ್ರಸಿದ್ಧ " ಮುತ್ಯಾಲ ಮಡುವು "
ಆನೇಕಲ್ ......ಪಟ್ಟಣದಿಂದ 4 ಕಿ.ಮೀ. ಅಂತರದಲ್ಲಿ ಇರುವ ಹಚ್ಚ ಹಸಿರಿನ ಪ್ರಕ್ರುತಿ ಸೌಂದರ್ಯ ನೋಡುವುದೊಂದೆ ಆನಂದ . ಜುಳು. ಜುಳು. ಹರಿಯುವ ನೀರಿನ ನಿನಾದ ಆಲಿಸುತ್ತಾ ಹಸಿರಿನ ನಡುವೆ 400 ಮೆಟ್ಟಿಲುಗಳನ್ನು ಇಳಿದು ( ಈಗ ಮೆಟ್ಟಿಲುಗಳನ್ನ ಗ್ರಾನೈಟ್ ನಲ್ಲಿ ಹಾಕಲಾಗುತ್ತಿದೆ ) ಕಣಿವೆ ತಲುಪಿದರೆ ಆಯಾಸ ಮರೆಯಾಗಿ ಆನಂದ ಉಂಟಾಗುತ್ತದೆ. ಸುಮಾರು ಎತ್ತರದಿಂದ ಧುಮುಕುವ ನೀರಿನ ಝರಿಯ ಜಲಪಾತ ಕೈಬೀಸಿ ಕರೆಯುತ್ತದೆ. ಇಲ್ಲಿ ನೀರು ಮುತ್ತಿನಂತೆ ದುಮುಕುವುದರಿಂದ " ಮುತ್ಯಾಲ ಮಡುವು " ಎಂಬ ಹೆಸರು ಬಂದಿದೆ. ಈ ಜಲಪಾತದ ಅಡಿಯಲ್ಲಿ ನೀರಾಟವಾಡಿ ಮುಂದೆ ಸಾಗಿದರೆ ಮುತ್ಯಾಲಮ್ಮ ಹಾಗೂ ಶಿವನ ದೇವಾಲಯ ಮತ್ತು ನಾಗರ ಕಟ್ಟೆಗಳ ದರ್ಶನ ಪಡೆಯಬಹುದು.
ಮುತ್ಯಾಲ ಮಡುವಿನ ಬೆಟ್ಟವನ್ನು ಚಾರಣದ ಮೂಲಕ ಸಹ ಏರಬಹುದು. ಆಸಕ್ತಿ ಇರುವವರು ಕಣಿವೆಯಿಂದ ಕೆಲದೂರ ಅರಣ್ಯ ದಲ್ಲಿ ನಡೆದರೆ " ಶಂಖು ಚಕ್ರ " ಜಲಪಾತದ ವರೆಗೂ ಸಾಗಬಹುದು. ಒಂದು ಕೀ.ಮೀ ಹೆಚ್ಚಿನ ಕಾಡಿನ ಮಧ್ಯೆ ನಡೆದು ಹೋಗುವುದು ಅದ್ಭುತ ಅನುಭವವನ್ನ ಕೊಡುತ್ತದೆ.
ಇತ್ತೀಚೆಗೆ ಮಕ್ಕಳಿಗೆ ಆಟವಾಡಲು ಬೋಟಿಂಗ್ ವ್ಯವಸ್ಥೆ ಪಾರ್ಕಿನಲ್ಲಿ ಆಟದ ಆಟಿಕೆಗಳ ವ್ಯವಸ್ಥೆ ಮಾಡಲಾಗಿದೆ.
ಪ್ರವಾಸೋದ್ಯಮ ಇಲಾಖೆಯಿಂದ ಮಯೂರ ಹೋಟೆಲ್ ವ್ಯವಸ್ಥೆ ಯನ್ನ ಮಾಡಲಾಗಿದೆ. ಸರ್ಕಾರದಿಂದ 5 ಕೋಟಿ ಹಣ ಮಂಜೂರಾಗಿದ್ದು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ.
ಇತ್ತೀಚೆಗೆ ಸರ್ಕಾರವು ಸ್ವಾಮಿ ವಿವೇಕಾನಂದರ 120 ಅಡಿ ಎತ್ತರದ ಪ್ರತಿಮೆ ಯನ್ನು ಸ್ಥಾಪಿಸಲು ಯೋಜನೆ ಮಾಡಿದ್ದು ವಿಶ್ವ ಮಟ್ಟದಲ್ಲಿ ಅತ್ಯುತ್ತಮ ಪ್ರವಾಸೋದ್ಯಮ ಸ್ಥಳ ಎಂಬುದು ಖ್ಯಾತಿಯಾಗಲಿದೆ.
ಆನೇಕಲ್ ಸಿ.ನಂದೀಶ್

08/08/2022
ಮಯೂರ ನಿಸರ್ಗ ದೋಣಿ ವಿಹಾರದ ಒಂದು ಸುಂದರ ನೋಟ
08/08/2022

ಮಯೂರ ನಿಸರ್ಗ ದೋಣಿ ವಿಹಾರದ ಒಂದು ಸುಂದರ ನೋಟ

Address

Muthyalamaduvu Anekal
Bangalore
561206

Alerts

Be the first to know and let us send you an email when Hotel Mayura Nisarga Muthyalamaduvu KSTDC posts news and promotions. Your email address will not be used for any other purpose, and you can unsubscribe at any time.

Contact The Business

Send a message to Hotel Mayura Nisarga Muthyalamaduvu KSTDC:

Share

Category