Shimoga Bed Hall And Dormitory

Shimoga Bed Hall And Dormitory .

01/02/2022

#ಶಿವಮೊಗ್ಗ_ಬೆಡ್_ಹಾಲ್

16/12/2021
ನಾಡಿನ ಸಮಸ್ತ ಜನತೆಗೆ ನರಕ ಚತುರ್ದಶಿಯ ಹಾರ್ದಿಕ ಶುಭಾಶಯಗಳು.ಈ ದೀಪಗಳ ಹಬ್ಬ ದೀಪಾವಳಿಯು ಎಲ್ಲರ ಬಾಳಿನಲ್ಲಿ ಹೊಸ ಬೆಳಕನ್ನು ತರಲಿ ಎಂದು ಆಶಿಸುತ್...
03/11/2021

ನಾಡಿನ ಸಮಸ್ತ ಜನತೆಗೆ ನರಕ ಚತುರ್ದಶಿಯ ಹಾರ್ದಿಕ ಶುಭಾಶಯಗಳು.

ಈ ದೀಪಗಳ ಹಬ್ಬ ದೀಪಾವಳಿಯು ಎಲ್ಲರ ಬಾಳಿನಲ್ಲಿ ಹೊಸ ಬೆಳಕನ್ನು ತರಲಿ ಎಂದು ಆಶಿಸುತ್ತೇನೆ.

 #ಶಿವಮೊಗ್ಗ_ಬೆಡ್_ಹಾಲ್  ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ  ಶುಭಾಶಯಗಳು🌹...ಸರ್ವಸಿದ್ಧಿ ವಿನಾಯಕನು ತಮ್ಮೆಲ್ಲರ ...
10/09/2021

#ಶಿವಮೊಗ್ಗ_ಬೆಡ್_ಹಾಲ್


ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು🌹...

ಸರ್ವಸಿದ್ಧಿ ವಿನಾಯಕನು ತಮ್ಮೆಲ್ಲರ ಬಾಳಲ್ಲಿ ಸುಖ, ಶಾಂತಿ, ಆರೋಗ್ಯವನ್ನು ನೀಡಿ ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇನೆ🙏🚩...

Happy GANESH CHATURTHI

May your life be full
of delights and prosperity...

29/05/2021

ವ್ಯಾಕ್ಸಿನ್ ಗೆ ಸಂಬಂಧಪಟ್ಟ ಎಲ್ಲಾ ಪ್ರಶ್ನೆಗಳಿಗೆ

ಇಲ್ಲಿದೆ ಉತ್ತರ.....

#ಶಿವಮೊಗ್ಗ_ಬೆಡ್_ಹಾಲ್

ಆಟೋ, ಟ್ಯಾಕ್ಸಿ ಹಾಗೂ ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ ಘೋಷಿಸಿದ್ದ ಆರ್ಥಿಕ ಪ್ಯಾಕೇಜ್‌ ಅನ್ನು ಪಡೆಯಲು "ಸೇವಾ ಸಿಂಧು ವೆಬ್ ಪೋರ್ಟಲ್‌"ನಲ್ಲಿ ಇಂದಿ...
28/05/2021

ಆಟೋ, ಟ್ಯಾಕ್ಸಿ ಹಾಗೂ ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ ಘೋಷಿಸಿದ್ದ ಆರ್ಥಿಕ ಪ್ಯಾಕೇಜ್‌ ಅನ್ನು ಪಡೆಯಲು "ಸೇವಾ ಸಿಂಧು ವೆಬ್ ಪೋರ್ಟಲ್‌"ನಲ್ಲಿ ಇಂದಿನಿಂದ ಅರ್ಜಿ ಸಲ್ಲಿಸಬಹುದು--

ರಾಜ್ಯ ಸರ್ಕಾರವು ಕೋವಿಡ್ 19 ಸಂಬಂಧ ರಾಜ್ಯಾದ್ಯಂತ ಲಾಕ್ಡೌನ್ ಘೋಷಿಸಿರುವುದರಿಂದ ಆಟೋ ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಚಾಲಕರಿಗೆ ನಷ್ಟವಾಗಿರುವುದನ್ನು ಗಮನಿಸಿ ಅವರಿಗೆ ಪರಿಹಾರ ಧನವಾಗಿ 3 ಸಾವಿರ ರೂಪಾಯಿಗಳನ್ನು ಘೋಷಿಸಿ ಈಗ ಆನ್ ಲೈನ್ ಮೂಲಕ ನೆರವು ನೀಡಲು ಅರ್ಜಿ ಆಹ್ವಾನಿಸಲಾಗಿದೆ

ಪರಿಹಾರ ಧನ ನೀಡಲು ಅರ್ಜಿಗಳನ್ನು ಆನ್‌ಲೈನ್​ನಲ್ಲಿ "ಸೇವಾಸಿಂಧು" ವೆಬ್‌ ಪೋರ್ಟಲ್‌ ಮೂಲಕ ಸ್ವೀಕರಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಅರ್ಹ ಚಾಲಕರು ತಮ್ಮ ಅರ್ಜಿಗಳನ್ನು ಸೇವಾ ಸಿಂಧು ವೆಬ್ ಪೋರ್ಟಲ್ ಮುಖಾಂತರ ಸಲ್ಲಿಸಬೇಕಾಗಿ ಆರ್​ಟಿಒ ಕೋರಿದೆ.

ದೈನಂದಿನ ಉದ್ಯೋಗವನ್ನು ನಡೆಸಲಾಗದೆ ಆದಾಯ ಕಳೆದುಕೊಂಡಿರುವ ಆಟೋ, ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ ಒಂದು ಬಾರಿ ಪರಿಹಾರವಾಗಿ ರೂ.3,000ಗಳ ಪರಿಹಾರ ಧನವನ್ನು ನೀಡಲು ಈ ಕೆಳಕಂಡ ಷರತ್ತಿಗೊಳಪಟ್ಟು ಮಂಜೂರಾತಿ ನೀಡಿ ಆದೇಶಿಸಿದೆ.

ಎಲ್ಲಾ ಅರ್ಜಿಗಳು ಸೇವಾಸಿಂಧು ಪೋರ್ಟಲ್ https://sevasindhu.karnataka.gov.in/ ಮೂಲಕವೇ ಸ್ವೀಕೃತವಾಗತಕ್ಕದ್ದು. ದಿನಾಂಕ 24-04-2021ರಂದು ಚಾಲ್ತಿಯಲ್ಲಿದ್ದ ಚಾಲನೆ ಪರವಾನಗಿ ಪ್ರಮಾಣಪತ್ರ ಹೊಂದಿರುವ ಆಟೋ, ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಚಾಲಕರುಗಳಿಗೆ ಮಾತ್ರ ಅನ್ವಯಿಸತಕ್ಕದ್ದು. ಒಂದು ವಾಹನಕ್ಕೆ ಒಬ್ಬ ಚಾಲಕರಂತೆ ಮಾತ್ರ ಈ ನಗದು ಸೌಲಭ್ಯವನ್ನು ಪಡೆಯಲು ಅರ್ಹರಾಗಿರುತ್ತಾರೆ.

ಆಧಾರ್ ಕಾರ್ಡ್, ಚಾಲನಾ ಪರವಾನಗಿ, ವಾಹನ ನೋಂದಣಿ ಸಂಖ್ಯೆ ಫಲಾನುಭವಿಗಳಲ್ಲಿ ಕಡ್ಡಾಯವಾಗಿರ ಇರಬೇಕು. ಪರಿಹಾರ ಧನವು ಕೇವಲ ಚಾಲನೆ ಪರವಾನಗಿ ಪ್ರಮಾಣಪತ್ರವನ್ನು ಹೊಂದಿರುವ ಹಾಗೂ ಅಗತ್ಯವಿರುವ ಚಾಲಕರ ಬ್ಯಾಂಕ್ ಖಾತೆಗೆ DBT ಮುಖಾಂತರವೇ ಜಮೆ ಮಾಡಲಾಗುವುದು.

ಒಂದು ವೇಳೆ ಕೆಲವೊಂದು ಆಟೋ, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಮಾಲೀಕರು ಹೆಚ್ಚಿನ ಸಂಖ್ಯೆಯ ಆಟೋ, ಟ್ಯಾಕ್ಸಿ, ಮ್ಯಾಕ್ಸಿಗಳನ್ನು ಹೊಂದಿದ್ದು, ಅವರಿಗೆ ಪರಿಹಾರ ಧನ ಸಂದಾಯವಾದಲ್ಲಿ ಜೀವನ ನಿರ್ವಹಣೆಯನ್ನು ಎದುರಿಸುತ್ತಿರುವ ಚಾಲಕರಿಗೆ ಸಿಗದಂತೆಯಾಗುತ್ತದೆ. ಆದುದರಿಂದ ನಿಜವಾದ ಫಲಾನುಭವಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುತ್ತಿದೆ, ನಿಜವಾದ ಫಲಾನುಭವಿಗಳ ಆಧಾರ್, ಪ್ಯಾನ್ ಕಾರ್ಡ್, ಬ್ಯಾಂಕ್ ಖಾತೆಗೆ ಅಲಿಂಕ್ ಆಗಿರುವ ಬಗ್ಗೆ ಗಮನಹರಿಸಿ ವರ್ಗಾಯಿಸಲಾಗುವುದು.

ಮೇಲಿನ ಷರತ್ತು ಮತ್ತು ನಿಬಂಧನೆಗಳನ್ನು ಗಣನೆಗೆ ತೆಗೆದುಕೊಂಡು ಸೇವಾಸಿಂಧು ಪೋರ್ಟಲ್ ಮುಖಾಂತರ ಆನ್ಲೈನ್ ಮೂಲಕ ಅರ್ಜಿ ಹಾಕಬೇಕು. ಆಟೋ, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಚಾಲಕರ ಆಧಾರ್ ಕಾರ್ಡ್ ವಿವರಗಳನ್ನು ಸೇವಾ ಸಿಂಧು ಪೋರ್ಟಲ್ ನಲ್ಲಿ ನಮೂದಿಸಬೇಕು. ಚಾಲಕರ ಬ್ಯಾಂಕ್ ಖಾತೆ ವಿವರ, ಐಎಫ್.ಸಿ ಕೋಡ್, ಎಂಐಸಿಆರ್ ಕೋಡಿ ತಪ್ಪದೆ ಪೋರ್ಟಲ್ ನಲ್ಲಿ ನಮೂದಿಸಬೇಕು. ಚಾಲಕರು ಚಾಲನೆ ಮಾಡುವ ವಾಹನದ ನೋಂದಣಿ ಸಂಖ್ಯೆಯನ್ನು ಸಹ ನಮೂದಿಸಬೇಕು. ಸೇಸಾವ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳು ಆಧಾರ್ ಸಂಖ್ಯೆಗೆ ಲಿಂಗ್ ಆಗಿರುವ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗುವುದು ಎಂದು ಸಾರಿಗೆ ಇಲಾಖೆ ತಿಳಿಸಿದೆ.....

#ಶಿವಮೊಗ್ಗ_ಬೆಡ್_ಹಾಲ್...
...

"ಸುಮ್ಮನೆ ಕುಳಿತುಕೊಂಡರೆ, ದಾಸ್ಯದ ನೊಗ ಕಳಚದು, ಬಂದೂಕು ಹಿಡಿ, ನೀನು ಎದ್ದಿರುವ ಸದ್ದು ಕೇಳಿದರೆ ಸಾಕು, ಶತ್ರು ಪರಾರಿಯಾಗಬೇಕು!" - ಸಾವರ್ಕರ್ಸ...
28/05/2021

"ಸುಮ್ಮನೆ ಕುಳಿತುಕೊಂಡರೆ, ದಾಸ್ಯದ ನೊಗ ಕಳಚದು, ಬಂದೂಕು ಹಿಡಿ, ನೀನು ಎದ್ದಿರುವ ಸದ್ದು ಕೇಳಿದರೆ ಸಾಕು, ಶತ್ರು ಪರಾರಿಯಾಗಬೇಕು!" - ಸಾವರ್ಕರ್

ಸ್ವಾತಂತ್ರ್ಯ ವೀರಸಾವರ್ಕರ್ ಜಯಂತಿಯ ಶುಭಾಶಯಗಳು......

#ಶಿವಮೊಗ್ಗ_ಬೆಡ್_ಹಾಲ್...
...

*ಜಯಹನುಮಾನ್ ಜ್ಞಾನಗುಣಸಾಗರ್* ಎಂದು ಪ್ರಾರಂಭವಾಗುವ  'ಹನುಮಾನ್ ಚಾಲೀಸ' ವನ್ನು ಬಹಳಷ್ಟು ಮಂದಿ ಕೇಳಿಯೇ ಇರುತ್ತೇವೆ. ಅದನ್ನು ರಚಿಸಿದವರು ಯಾರು,...
25/05/2021

*ಜಯಹನುಮಾನ್ ಜ್ಞಾನಗುಣಸಾಗರ್* ಎಂದು ಪ್ರಾರಂಭವಾಗುವ 'ಹನುಮಾನ್ ಚಾಲೀಸ' ವನ್ನು ಬಹಳಷ್ಟು ಮಂದಿ ಕೇಳಿಯೇ ಇರುತ್ತೇವೆ. ಅದನ್ನು ರಚಿಸಿದವರು ಯಾರು, ರಚಿಸಲು ಸಂದರ್ಭ ಏನಿತ್ತು, ಇದರ ಬಗ್ಗೆ ಸ್ವಾರಸ್ಯಕರ 'ಕಥೆ' ಯೊಂದಿದೆ.

ವಾರಾಣಸಿಯಲ್ಲಿ ವಾಸ ಮಾಡುತ್ತಿದ್ದ ಸಂತ ತುಲಸೀದಾಸರು ರಾಮನಾಮ ಸಂಕೀರ್ತನದಲ್ಲಿ ನಿರತರಾಗಿ ಬ್ರಹ್ಮಾನಂದವನ್ನು ಅನುಭವಿಸುತ್ತಿದ್ದರು.
ಅವರ ಮಹಿಮೆಯನ್ನರಿತ ನೂರಾರು ಜನಗಳು ಅವರ ಆಶೀರ್ವಾದಕ್ಕಾಗಿ, ಅವರ ಹತ್ತಿರ ತಮ್ಮ ಸಂಕಷ್ಟ ಗಳನ್ನು ಹೇಳಿಕೊಂಡು ಪರಿಹಾರ ಪಡೆಯುವುದಕ್ಕಾಗಿ ನಿತ್ಯವೂ ನೆರೆಯುತ್ತಿದ್ದರು. ರಾಮನಾಮ ಉಪಾಸನೆಯಲ್ಲಿ ಅವರೆಲ್ಲರನ್ನೂ ತೊಡಗಿಸುತ್ತಿದ್ದರು
ಶ್ರೀ ತುಲಸೀದಾಸರು. ಇವರ ಪ್ರಭಾವ, ಪವಾಡಗಳ ಮಹಿಮೆಗಳಿಂದಾಗಿ ಅನ್ಯಮತಗಳ ಜನರೂ ಇವರ ಬಳಿ ಬರುತ್ತಿದ್ದರು, ಹಾಗೂ ರಾಮನಾಮ ಜಪದಲ್ಲಿ ಭಾಗಿಯಾಗುತ್ತಿದ್ದರು.
ಇದು ಅನ್ಯಮತದ ಗುರುಗಳಿಗೆ ಸಹನೆಯಾಗದ ವಿಷಯವಾಯಿತು. 'ಈ ತುಲಸೀದಾಸ ಏನೋ ಮೋಡಿ ಮಾಡಿ ನಮ್ಮ ಮತದವರನ್ನು ತನ್ನ ಕಡೆಗೆ ಸೆಳೆದುಕೊಂಡು ತಮ್ಮ ಮತಕ್ಕೆ ಸೇರಿಸಿಕೊಳ್ಳಲು ಹುನ್ನಾರ ನಡೆಸುತ್ತಿದ್ದಾನೆ' ಎಂದು ಡಿಲ್ಲಿ ಬಾದಶಾಹನವರೆಗೆ ದೂರು ತೆಗೆದುಕೊಂಡು ಹೋದರು.
ಈ ಮಧ್ಯೆ ವಾರಾಣಸಿಯಲ್ಲಿನ ಸದಾಚಾರವಂತನಾದ ಗೃಹಸ್ಥನೊಬ್ಬ ತನ್ನ ಏಕಮಾತ್ರ ಪುತ್ರನ ವಿವಾಹವನ್ನು ಒಂದು ಉತ್ತಮ ಕನ್ಯೆಯೊಂದಿಗೆ ನೆರವೇರಿಸಿದ. ಮಗ ಸೊಸೆ ಆನಂದದಿಂದ ಸಂಸಾರ ನಡೆಸುತ್ತಿದ್ದರು. ಆದರೆ ವಿಧಿಯಾಟ ಬೇರೆಯೇ ಇತ್ತು. ಸ್ವಲ್ಪ ಕಾಲದಲ್ಲೇ ಮಗ ಹಟಾತ್ತನೆ ತೀರಿಕೊಂಡ. ಆ ಚಿಕ್ಕ ವಯಸ್ಸಿನ ಹೆಂಡತಿಯ ಶೋಕ ಮುಗಿಲು ಮುಟ್ಟಿತ್ತು. ಗಂಡನ ಶವದ ಮೇಲೆ ಬಿದ್ದು ಬಿದ್ದು ರೋದಿಸುತ್ತಿದ್ದಳು. ಏನು ರೋದಿಸಿದರೆ ಏನು, ಹೋದ ಜೀವ ಪುನಃ ಬಂದೀತೇ ಎಂದು ಅವಳಿಂದ ಬಿಡಿಸಿಕೊಂಡು ಶವಯಾತ್ರೆಗೆ ಸಿದ್ಧ ಮಾಡಿಕೊಂಡರು ಬಂಧುಗಳು. ಶವಯಾತ್ರೆ ಹೊರಟಿತು. ಅವಳನ್ನು, ನೆರೆದಿದ್ದ ಸ್ತ್ರೀಯರು ಹಿಡಿದುಕೊಂಡಿದ್ದರೂ ಕೊಸರಿಕೊಂಡು ತಾನೂ ಶವದ ಹಿಂದೆ ಓಡಿದಳು.
ಶವಯಾತ್ರೆ ತುಲಸೀದಾಸರ ಆಶ್ರಮದ ಹತ್ತಿರ ಬಂದಾಗ ಅವಳು ನೇರವಾಗಿ ಆಶ್ರಮದೊಳಗೆ ಹೋಗಿ ಧ್ಯಾನ ಮಗ್ನರಾಗಿದ್ದ ತುಲಸೀದಾಸರ ಚರಣಗಳನ್ನು ಗಟ್ಟಿಯಾಗಿ ಹಿಡಿದು ತನ್ನ ಪತಿಯನ್ನು ಹೇಗಾದರೂ ಬದುಕಿಸಿ ಕೊಡಬೇಕೆಂದು ಅಂಗಲಾಚಿ ಬೇಡಿದಳು.
ತುಲಸೀದಾಸರು 'ದೀರ್ಘ ಸುಮಂಗಲೀ ಭವ' ಎಂದುಬಿಟ್ಟರು ಕೂಡಾ.
ಅವಳು ಮತ್ತೂ ರೋದಿಸುತ್ತಾ ' ಇನ್ನೆಲ್ಲಿಯ ಸುಮಂಗಲಿ ಸ್ವಾಮೀಜೀ, ನನ್ನ ಪತಿಯ ಶವಯಾತ್ರೆಯೇ ನಿಮ್ಮ ಆಶ್ರಮದ ಮುಂದೆ ಹೋಗುತ್ತಿದೆ. ಹೇಗಾದರೂ ಮಾಡಿ ನನ್ನ ಪತಿಯನ್ನು ಬದುಕಿಸಿಕೊಟ್ಟು ನಿಮ್ಮ ಆಶೀರ್ವಾದ ವನ್ನು ನಿಜಮಾಡಿ ಸ್ವಾಮೀಜೀ' ಎಂದು ಭೋರಿಟ್ಟಳು.
'ಅಳಬೇಡ ತಾಯೀ, ನನ್ನ ಬಾಯಿಂದ ಶ್ರೀ ರಾಮಚಂದ್ರ ಮಹಾಪ್ರಭುವೇ ಹಾಗೆ ನುಡಿಸಿದ್ದಾನೆ. ಆ ಮಹಾಮಹಿಮನ ವಾಕ್ಕು ವ್ಯರ್ಥವಾಗಲಾರದು. ನಡೆ, ನೋಡೋಣ, ನಿನ್ನ ಪತಿಯನ್ನು' ಎಂದು ನುಡಿದು ಎದ್ದು ಹೊರಟರು. ಯಾವುದೋ ಕಾರಣಕ್ಕೆ ಶವಯಾತ್ರೆ ಅಲ್ಲಿ ನಿಂತಿತ್ತು. ಶವವನ್ನು ಇಳಿಸಿದ್ದರು. ತುಲಸೀದಾಸರು ಶವವನ್ನೊಮ್ಮೆ ದೃಷ್ಟಿಸಿ ನೋಡಿ, ರಾಮನಾಮ ಜಪಿಸಿ, ತಮ್ಮ ಕಮಂಡಲದಿಂದ ಜಲಪ್ರೋಕ್ಷಣೆ ಮಾಡಿದರು.
ಆಶ್ಚರ್ಯವೆಂಬಂತೆ ಶವದಲ್ಲಿ ಮೆಲ್ಲನೆ ಚಲನೆ ಮೂಡಿ ಚೈತನ್ಯ ಬಂದಿತು!! ಅದನ್ನು ಪ್ರತ್ಯಕ್ಷ ನೋಡುತ್ತಾ ನಿಂತಿದ್ದ ಜನಸ್ತೋಮ ಸ್ವಾಮೀಜಿ ಯವರಿಗೂ,
ಶ್ರೀ ರಾಮಚಂದ್ರನಿಗೂ ಜೈ ಜೈ ಕಾರ ಘೋಷಣೆ ಮಾಡುತ್ತಾ ಆನಂದದಿಂದ ವಾಪಸ್ಸಾದರು.

ಈ ಪವಾಡದಂತಹ ಘಟನೆಯಿಂದಾಗಿ ತುಲಸೀದಾಸರ ಮಹಿಮೆ ಇನ್ನೂ ಹೆಚ್ಚು ಹೆಚ್ಚು ಹರಡಲಾರಂಭಿಸಿತು. ಜನಗಳಲ್ಲಿ ಶ್ರೀ ರಾಮನ ಮೇಲೆ ಭಕ್ತಿ ಹೆಚ್ಚು ಹೆಚ್ಚು ಬೆಳೆಯಲು ಅನುವಾಯಿತು.
ಈಗಲಂತೂ ಪರಮತಸ್ಥರ ಅಸಹನೆ ಎಲ್ಲೆ ಮೀರಿತು. ಅವರೆಲ್ಲಾ ಸೇರಿ ನೇರವಾಗಿ ಡಿಲ್ಲಿ ಬಾದಶಾಹನಲ್ಲಿಗೇ ಹೋಗಿ ಈ ತುಲಸೀದಾಸ ತನ್ನ ಪವಾಡಗಳಿಂದ ನಮ್ಮ ಮತದವರನ್ನು ಮೋಸಗೊಳಿಸುತ್ತಿದ್ದಾನೆ, ಎಂದು ಫಿ಼ರ್ಯಾದು ಕೊಟ್ಟರು.
ಬಾದಶಹಾ ವಿಚಾರಣೆ ಮಾಡುತ್ತೇನೆಂದು ಹೇಳಿ ತುಲಸೀದಾಸರನ್ನು ತನ್ನ ದರ್ಬಾರ್ ಗೆ ಕರೆಸಿ 'ತುಲಸೀದಾಸರೇ, ನೀವು ನಿಮ್ಮ ರಾಮ್ ನಾಮ್ ಎಲ್ಲಕ್ಕಿಂತ ಮಿಗಿಲು ಎಂದು ಪ್ರಚಾರ ಮಾಡುತ್ತಿದ್ದೀರಂತೆ, ಹೌದೇ?' ಎಂದು ಪ್ರಶ್ನಿಸಿದ.

ತುಲಸೀದಾಸರು ಸ್ವಲ್ಪವೂ ಅಂಜದೇ, ಅಳುಕದೇ 'ಹೌದು ಪ್ರಭೂ! ಸೃಷ್ಟಿಯಲ್ಲಿ ಸಕಲರಿಗೂ ಆಧಾರವಾಗಿರುವುದು ಶ್ರೀ ರಾಮನಾಮವೇ ಹೊರತು ಬೇರಾವುದೂ ಅಲ್ಲ' ಎಂದರು.

ಬಾದಶಹಾ: ಓಹೋ ಹಾಗೇನು? ನೀವು ನಿಮ್ಮ ರಾಮ್ ನಾಮ್ ಶಕ್ತಿಯಿಂದ ಏನು ಬೇಕಾದರೂ ಸಾಧಿಸಬಹುದು ಎನ್ನುತ್ತಿದ್ದೀರಂತೆ?

ತುಲಸೀದಾಸರು:ಸತ್ಯಸ್ಯ ಸತ್ಯ! ಶ್ರೀ ರಾಮನ ನಾಮಸ್ಮರಣೆಯಿಂದ ಸಾಧಿಸಲಾಗದ್ದು ಏನಿದೆ?'

ಬಾದಶಹಾ: ಮರಣವನ್ನು ಸಹ ಜಯಿಸಬಹುದು ಎಂದು ಹೇಳುತ್ತಿದ್ದೀರಂತೆ?

ತುಲಸೀದಾಸರು: ಹೌದು ಪ್ರಭುಗಳೇ, ರಾಮನಾಮಕ್ಕೆ ಯಾವುದೂ ಅಸಾಧ್ಯವಲ್ಲ.

ಬಾದಶಹಾ: ಹಾಗೋ, ಹಾಗಾದರೆ ನಾವು ಇಲ್ಲಿಗೆ ಒಂದು ಶವವನ್ನು ತರಿಸುತ್ತೇವೆ. ಅದಕ್ಕೆ ನೀವು ನಿಮ್ಮ ರಾಮ್ ನಾಮ್ ಶಕ್ತಿಯಿಂದ ಮತ್ತೆ ಜೀವ ಬರಿಸಿ. ಆಗ ನಿಮ್ಮ ರಾಮ್ ನಾಮ್ ಶಕ್ತಿಯನ್ನು ನಂಬುತ್ತೇವೆ.

ತುಲಸೀದಾಸರು: ಪ್ರಭುಗಳು ಕ್ಷಮಿಸಬೇಕು. ಜನನ ಮರಣಗಳು ಆ ಜಗತ್ಪತಿಯ ಆಜ್ಞೆಯಂತೆ ನಡೆಯುತ್ತವೆಯೇ ಹೊರತು ನಾವು ಬಯಸಿದಂತೆ ಅಲ್ಲ.

ಬಾದಶಹಾ: ಆಹಾಹಾ, ನೋಡಿದಿರಾ ತುಲಸೀದಾಸ್ ಅವರೇ. ನಿಮ್ಮ ಮಾತನ್ನು ನೀವೇ ನಿಲ್ಲಿಸಿ ಕೊಳ್ಳಲಾಗದೇ, ನೀವು ಪ್ರಚಾರ ಮಾಡುತ್ತಿರುವ ಸುಳ್ಳನ್ನು ಪ್ರತ್ಯಕ್ಷವಾಗಿ ಅಲ್ಲಗಳೆಯಲಾರದೇ, ಹೀಗೆಲ್ಲಾ ಹೇಳಿ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೀರಿ.
ನೀವು ಹೇಳುತ್ತಿರುವುದೆಲ್ಲಾ ಸುಳ್ಳು ಎಂದು ಎಲ್ಲರೆದುರು ಒಪ್ಪಿಕೊಳ್ಳಿ. ಇಲ್ಲವೇ ಶವಕ್ಕೆ ಜೀವ ಬರಿಸಿ ನಿಮ್ಮ ಮಾತು ಉಳಿಸಿಕೊಳ್ಳಿ. ಆಗ ನಿಮ್ಮನ್ನು ಹೋಗಲು ಬಿಡುತ್ತೇವೆ.

ಆಗ ತುಲಸೀದಾಸರು "ಶ್ರೀ ರಾಮಾ, ಇಂತಹ ವಿಪತ್ಕರ ಪರಿಸ್ಥಿತಿಯನ್ನು ನೀನೇ ಸೃಷ್ಟಿಸಿದ್ದೀಯೆ. ಈಗ ನೀನೇ ಅದನ್ನು ಪರಿಹರಿಸಬೇಕು ತಂದೇ" ಎಂದು ಮನಸ್ಸಿನಲ್ಲೇ ಶ್ರೀ ರಾಮನ ಧ್ಯಾನದಲ್ಲಿ ಮಗ್ನರಾಗುತ್ತಾರೆ.
ಅದನ್ನು ಅವರ ಉದ್ಧಟತನವೆಂದು ಭಾವಿಸಿದ ಬಾದಶಹಾ ತುಲಸೀದಾಸರನ್ನು ಬಂಧಿಸಲು ಆಜ್ಞೆ ಮಾಡುತ್ತಾನೆ.

ಅಷ್ಟೇ, ಎಲ್ಲಿಂದ ಬಂದವೋ ಸಾವಿರಾರು ಕೋತಿಗಳ ಸೈನ್ಯ! ದರ್ಬಾರ್ ನಲ್ಲಿ ಧುಮುಕಿ ತುಲಸೀದಾಸರನ್ನು ಬಂಧಿಸಲು ಉದ್ಯುಕ್ತರಾಗುತ್ತಿದ್ದ ರಕ್ಷಕಭಟರನ್ನೂ, ಅಲ್ಲಿದ್ದ ಎಲ್ಲರನ್ನೂ ಘಾಸಿಗೊಳಿಸಿ ಅವರ ಆಯುಧಗಳನ್ನೆಲ್ಲಾ ಕಸಿದುಕೊಂಡು ಎಲ್ಲರಲ್ಲೂ ದಿಗ್ಭ್ರಾಂತಿ ಹುಟ್ಟಿಸಿ ಚದರಿ ಓಡುವಂತೆ ಮಾಡಿದವು.
ಈ ಗಲಭೆಗೆ ಕಣ್ತೆರೆದು ನೋಡಿದ ತುಲಸೀದಾಸರಿಗೆ ಮಹದಾಶ್ಚರ್ಯ!!! ಸುತ್ತಲೂ ನೋಡಿದಾಗ ಅವರಿಗೆ ಸಿಂಹದ್ವಾರದಲ್ಲಿ ಆಸೀನನಾಗಿದ್ದ ಮಾರುತಿಯೇ ಕಂಡನಂತೆ!!!
ಶ್ರೀ ರಾಮಭಕ್ತ ಹನುಮಂತನೇ ಸ್ವತಃ ತಮ್ಮ ರಕ್ಷಣೆಗಾಗಿ ಬಂದಿರುವುದನ್ನು ನೋಡಿ ತುಲಸೀದಾಸರು ರೋಮಾಂಚನಗೊಂಡು ಆ ಕ್ಷಣದಲ್ಲಿ ಮನದಲ್ಲಿ ಮೂಡಿದ ' ಜಯ ಹನುಮಾನ್, ಜ್ಞಾನಗುಣಸಾಗರ್....'
ಎಂಬ 40 ದೋಹಾಗಳನ್ನು ರಚಿಸಿ ಹಾಡಿಹೊಗಳುತ್ತಾರೆ.
ಆ 40 ದೋಹಾಗಳೇ ಹನುಮಾನ್ ಚಾಲೀಸ.
**********
||ಜಯ ಜಯ ರಘುವೀರ ಸಮರ್ಥ||

ಲಸಿಕೆಯ 2ನೇ ಡೋಸ್ ತಡವಾದರೆ ಚಿಂತೆ ಬೇಡ :--ಕೇಂದ್ರ ಸರ್ಕಾರವು ಕೋವಿಶೀಲ್ಡ್, ಕೊವ್ಯಾಕ್ಸಿನ್ ಲಸಿಕೆಯ ಮೊದಲ ಡೋಸ್ ಪಡೆದವರು ಎರಡನೇ ಡೋಸ್ ಪಡೆಯುವ...
22/05/2021

ಲಸಿಕೆಯ 2ನೇ ಡೋಸ್ ತಡವಾದರೆ ಚಿಂತೆ ಬೇಡ :--

ಕೇಂದ್ರ ಸರ್ಕಾರವು ಕೋವಿಶೀಲ್ಡ್, ಕೊವ್ಯಾಕ್ಸಿನ್ ಲಸಿಕೆಯ ಮೊದಲ ಡೋಸ್ ಪಡೆದವರು ಎರಡನೇ ಡೋಸ್ ಪಡೆಯುವ ಸಮಯವನ್ನು ವಿಸ್ತರಿದ್ದು, ಮೊದಲ ಡೋಸ್ ಪಡೆದವರು ಇಷ್ಟೊಂದು ವಿಳಂಬವಾದರೆ ಹೇಗೆ ಎಂಬ ಚಿಂತೆಯಲ್ಲಿದ್ದಾರೆ. ಆದರೆ, ಎರಡನೇ ಡೋಸ್ ಪಡೆಯಲು ಎಳಂಬವಾದರೂ ಯಾವುದೇ ಸಮಸ್ಯೆಯಿಲ್ಲ. ಬದಲಾಗಿ ವಿಳಂಬವಾದಷ್ಟು ಉಪಯೋಗವೇ ಇದೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ...

#ಶಿವಮೊಗ್ಗ_ಬೆಡ್_ಹಾಲ್

ಶಿವಮೊಗ್ಗ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯಲ್ಲಿಆಂಬುಲೆನ್ಸ್ ಸಹಾಯವಾಣಿ ಕೇಂದ್ರ ಆರಂಭ --ಕೋವಿಡ್ -19 ಯಿಂದ ಮರಣ ಹೊಂದಿದ ಮೃತ ದೇಹಗಳನ್ನು ಮೆಗ್ಗಾನ...
18/05/2021

ಶಿವಮೊಗ್ಗ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯಲ್ಲಿ
ಆಂಬುಲೆನ್ಸ್ ಸಹಾಯವಾಣಿ ಕೇಂದ್ರ ಆರಂಭ --

ಕೋವಿಡ್ -19 ಯಿಂದ ಮರಣ ಹೊಂದಿದ ಮೃತ ದೇಹಗಳನ್ನು ಮೆಗ್ಗಾನ್ ಆಸ್ಪತ್ರೆಯ ಶವಗಾರದಿಂದ ಸಾಗಿಸಲು ಖಾಸಗಿ ಆಂಬುಲೆನ್ಸ್ ವಾಹನ ಮಾಲೀಕರು ಸಾರ್ವಜನಿಕರಿಂದ ಮಿತಿ ಇಲ್ಲದೆ ಹೆಚ್ಚು ಹಣ ವಸೂಲಿ ಮಾಡುತ್ತಿದ್ದು ಸಾರ್ವಜನಿಕರಿಗೆ ಇದು ದೊಡ್ಡ ಮುಳುವಾಗಿತ್ತು. ಇದನ್ನು ಗಮನಿಸಿದ ಜಿಲ್ಲಾಡಳಿತ, ಜಿಲ್ಲಾ ರಕ್ಷಾಣಾಧಿಕಾರಿಗಳ ನೇತೃತ್ವದಲ್ಲಿ ಇಂದಿನಿಂದ
ಆಂಬುಲೆನ್ಸ್ ಸಹಾಯವಾಣಿ ಕೇಂದ್ರ ಆರಂಭಿಸಲಾಗಿದೆ..

ಇಂದಿನಿಂದ ಸಾರ್ವಜನಿಕರು ಕಡಿಮೆ ದರದಲ್ಲಿ ಆಂಬುಲೆನ್ಸ್ ಸೇವೆಯನ್ನು ಪಡೆಯಬಹುದಾಗಿದೆ....

#ಶಿವಮೊಗ್ಗ_ಬೆಡ್_ಹಾಲ್

ಶ್ರೀ ಶಂಕರ ಜಯಂತಿಯ ಶುಭಾಶಯಗಳು🙏🚩🚩🚩  #ಶಿವಮೊಗ್ಗ_ಬೆಡ್_ಹಾಲ್
17/05/2021

ಶ್ರೀ ಶಂಕರ ಜಯಂತಿಯ ಶುಭಾಶಯಗಳು🙏🚩🚩🚩


#ಶಿವಮೊಗ್ಗ_ಬೆಡ್_ಹಾಲ್

Address

Shimoga
577201

Website

Alerts

Be the first to know and let us send you an email when Shimoga Bed Hall And Dormitory posts news and promotions. Your email address will not be used for any other purpose, and you can unsubscribe at any time.

Share

Category